Posts

Showing posts from March, 2020
ಎಲ್ಲಿದೆ ನಮ್ಮ ಮನೆ ?!                                              ~ ಎಸ್.ಜಿ.ಶಿವಶಂಕರ್ ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು , ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ ಹೊರಡುತ್ತಿದ್ದರು. ಅವರೆಲ್ಲರ ಮನೆಗಳೂ ಪಾರ್ಕಿಗೆ ಹತ್ತಿರದಲ್ಲೇ ಇದ್ದವು. ಇಂದು ಆರು ಜನರಲ್ಲಿ ನಾಲ್ವರು ಮಾತ್ರ ಇದ್ದರು. ಏಳೂವರೆಯಾದರೂ ಅವರಿನ್ನೂ ಕುಳಿತೇ ಇದ್ದರು. ಗುಂಪಿನಲ್ಲಿ ಒಬ್ಬರಾಗಿದ್ದ ರಂಗಣ್ಣನಿಗೆ ಕಾಯುತ್ತಿದ್ದರು. ಅವರು ಕಾಯುತ್ತಿದ್ದ ವ್ಯಕ್ತಿ ರಂಗಣ್ಣ ಆತುರಾತುರವಾಗಿ ಬಂದು ಗುಂಪು ಸೇರಿಕೊಂಡರು. “ ಯಾಕೆ ಲೇಟು.. ?” ಹಿರಿಯರಾದ ಅನಂತಯ್ಯ ಕೇಳಿದರು. “ ಅದೊಂದು ದೊಡ್ಡ ಕತೆ” ರಂಗಣ್ಣ ನಿಟ್ಟುಸಿರುಬಿಟ್ಟ. “ ಸಣ್ಣದಾಗಿ ಹೇಳು” ಎಂದು ನಕ್ಕ ಭಾಸ್ಕರ್ ಮರುಕ್ಷಣ , ತಾನು ನಗಬಾರದಿತ್ತು , ಜೋಕ್ ಮಾಡಬಾರದಿತ್ತು ಎ
ಮನದ ಕೃಷಿ! ನೆಲದ ಕೃಷಿಯಂತೆ ಮನದ ಕೃಷಿ ನೆಲ ಉತ್ತು ಹಸನಾಗಿಸಿ ಬೀಜ ಬಿತ್ತಿ ಗೊಬ್ಬರ ಉಣಿಸಿ ಕಾಲಕಾಲಕ್ಕೆ ನೀರೆರೆದರೆ ಉತ್ಕೃಷ್ಟ ಕೃಷಿ! ಜೀವಜಾಲಕ್ಕೆ ಸಮೃದ್ಧ ಉಣಿಸು! ವಿಚಾರದಿಂದ ಮನವ ಹಸನಾಗಿಸಿ ಉತ್ತಮೋತ್ತಮ ವಿಷಯಗಳ ಬಿತ್ತಿ ನಿರಂತರ ಮಥನದ ನೀರೆರದರೆ ಉತ್ಕೃಷ್ಠ ವ್ಯಕ್ತಿತ್ವದ ಬೆಳೆ! ಸೊಗಸುವುದು ಇಳೆ! ನೆಮ್ಮದಿ! ಯಾರಿದ್ದರೀ ಇಳೆಯ ಆದಿಯಲಿ ? ಯಾರುಳಿವರೀ ಇಳೆಯ ಅಂತ್ಯದಲಿ ? ಎಲ್ಲಿದ್ದೆವಿಲ್ಲಿ ಜೀವ ತಳೆವ ಮುನ್ನ ? ಹೋಗುವುವೆಲ್ಲಿಗೆ ಜೀವ ಕಳೆದ ಮೇಲೆ ? ಈ ಚಿಂತೆಗಳು ಕಂತೆಗಳು ನಮಗೇಕೆ ? ಅದಕಾಗೇ ಸೇರುತ್ತವೆ É ನೂರಾರು ಸಂತೆ! ಮಾರುವರು ಕೊಳುವವರು ನೂರಿಹರು ಸಂತೆಗೆ ಹೋಗದೆ ಕಂತೆ ಕಟ್ಟದೆ ಕರುಬದೆ ಕಿರುಬದೆ ಸೊರಗದೆ ಇರುವುದರಲಿ ಸೊಗಸು ಕಾಣುತ್ತ ಮಗ್ಗ ನೇಯುವುದರಲಿ ಬದುಕುವುದು ವಿಹಿತ ಜೀವರಿಗೆ ಸಹಜ! ಸಹಜ ಜೀವನ ಜಗವೊಂದು ಮಗ್ಗ ನೇಯುವುದೇ ಜೀವರ ಕರ್ಮ ನೋಯದೇ ಬೇಯದೆ ನೇಯುವುದು ಜೀವನದ ಮರ್ಮ ಇದನರಿತರೆ ಜೀವಿಗಳಿಗೆ ಮಗ್ಗವೇ ಸಗ್ಗ! ನಿಯಂತ್ರಣ! ಏನೆಲ್ಲಾ ಮಾಡಿದೆವು ಬಾನೆತ್ತರ ಬೆಳೆದೆವು ಗ್ರಹ ನಕ್ಷತ್ರಗಳ ಎಣಿಸಿದೆವು ದೂರಗಳ ಗುಣಿಸಿದೆವು ಚಂದ್ರನಿಗೂ ಏಣಿ ಹಾಕಿದೆವು ಮಂಗಳನಿಗೂ ಲಗ್ಗೆ ಹಾಕಿದೆವು ಇಲ್ಲಿಂದಲೇ ಅಲ್ಲಿನ ಯಂತ್ರಗಳ ನಿಯಂತ್ರಿಸಬಲ್ಲೆವಾದೆವು ಆದರೆ..ಆದರೆ.. ನಿಯಂತ್ರಿಸ