Posts

Showing posts from September, 2012

Udayavani: ಕಾಲೆಳೆಯುವಾಟ

ಕಾಲೆಳೆಯುವಾಟ!                        -ಎಸ್.ಜಿ.ಶಿವಶಂಕರ್  ವಿಶ್ವ ಇಲ್ಲದ ಮೀಸೆಯನ್ನು ತಿರುವಿದ!  ವಿಶಾಲೂ ಹಣೆ ಚಚ್ಚಿಕೊಂಡಳು!  ವಿಶ್ವನ ಇಬ್ಬರು ಮಕ್ಕಳು ಪಿಂಕಿ ಮತ್ತು ಪಲ್ಲಿ ಕಕ್ಕಾಬಿಕ್ಕಿಯಾದರು!  ಎರಡು ಸಾವಿರ ರೂಪಾಯಿ ಕಕ್ಕಿ ಎಲ್ಲ ಕಕ್ಕಾಬಿಕ್ಕಿಯಾಗುವಂತ, ಬೇಟೆಗಾರರು ಉಪಯೋಗಿಸುವಂತ ಬೂಟುಗಳನ್ನು ವಿಶ್ವ ಕೊಂಡು ತಂದಿದ್ದ!  `ಇದು ಅತಿಯಾಯ್ತು, ಈ ಹಣಕ್ಕೆ ಒಂದು ರೇಷ್ಮೆ ಸೀರೆ ಬರ್ತಿತ್ತು!’ ವಿಶಾಲೂ ಉದ್ಗರಿಸಿದಳು!  `ಒಂದು ಸ್ಟೋನ್ ವಾಷ್ ಜೀನ್ಸು, ನಾಲ್ಕು ಟೀ ಷರ್ಟು ಬರುತ್ತಿತ್ತು! ಅಪ್ಪ ಖರ್ಚು ಮಾಡಿದ ಹಣಕ್ಕೆ!’ ವಿಶ್ವನ ಮಗನ ಉದ್ಗಾರ!  ‘ಒಂದು ಗ್ರಾಂಡ್ ಆಗಿರೋ ಡ್ರೆಸ್ ಮೆಟೀರಿಯಲ್ ಬರ್ತಿತ್ತು’ ಪಿಂಕಿ ಕೊರಗಿದಳು.  `ಹೌದು ನೀವು ಹೇಳೋದೆಲ್ಲಾ ಬರ್ತಿತ್ತು! ಆದರೆ ಇಂತಾ ಷೂಸು ಬರ್ತಿದ್ದವಾ..?’ ರೇಗಿದ ವಿಶ್ವ, ಧೈರ್ಯ ಮಾಡಿ!  `ಬರ್ತಿರಲಿಲ್ಲ ನಿಜ! ಆದರೆ ಇಂತಾ ದರಿದ್ರದ ಶೂಸು ನಿಮಗೆ ಯಾಕೆ ಬೇಕಿತ್ತು..?’  `ಮತ್ತೆ ಫ್ಯಾಕ್ಟ್ರೀಲಿ ಕಾಲೆಳೆಯುತ್ತಾರಲ್ಲ...... ಆಗ ಬೀಳದೆ ಗಟ್ಟಿಯಾಗಿ ನೆಲದ ಮೇಲೆ ನಿಂತ್ಕೊಳ್ಳೋದಕ್ಕೆ ಇಂತಾ  ಬೂಟುಗಳು ಬೇಕೇಬೇಕು!’  `ಏನು ಕಾಲೆಳೆಯೋದೆ..? ಏನು ಕಬಡ್ಡಿ ಆಡ್ತಾರಾ..?’ ವಿಶಾಲೂ ಅರ್ಥವಾಗದೆ ಕೇಳಿದಳು.   `ಹೌದು ಅದು ಕಬಡ್ಡೀನೆ! ಆದರೆ ಕಬಡ್ಡಿ ಕಬಡ್ಡಿ ಅಂತ ಹೇಳೋದಿಲ್ಲ ಅಷ್ಟೆ! ಸಡನ್ನಾಗಿ ಕಾಲೆಳೆದುಬಿಡ್ತಾರೆ’  `ಹಾಗಿದ್ದರೆ ಕಾಲಿಗೆ ಎಣ್ಣೆ ಸವರ